ದಾಸನೆಂಬರು ನನ್ನ – ೨ ಅ.ಕ ದಾಸ್ ( Kannada Prose – 2 )

ನಾನು ಯಾರೆಂಬುದನ್ನು ನಾನು ಇನ್ನು ತಿಳಿದಿಲ್ಲ, ಪ್ರಯತ್ನವು ಫಲಿಸಿತು ಅಂದೇ ಮಾತೆಯ ದರ್ಶನ ಮಾಡಿದಾಗ, ಈಗ ಎಲ್ಲರು ನನ್ನನ್ನು ಕಾಳಿದಾಸನೆನ್ನುತ್ತಾರೆ. ಮುಂದೊಂದು ದಿನ ಜಗತ್ತು ಕತ್ತಲಿನಲ್ಲಿ ಕೂಡಿದ್ದರು ಮಾತೆ ಬರುವುದಿಲ್ಲ, ಆಗ ಭಯಬೀತರಾಗಬೇಡಿ ಯಾವುದಾದರು ರೂಪದಲ್ಲಿ ಬರುವಳು.ಆದರೆ ನನ್ನಂತ ಮೂರ್ಖನಲ್ಲೂ ಅತಿ ಹೇರಳವಾಗಿ ಇದ್ದ ಜ್ಞಾನವೇನೆಂಬುದನ್ನು ತಿಳಿಸುವೆ.

ನಾನು ಜ್ಞಾನಿಯಲ್ಲ ನಾನು ಈಗ ಅರಿತಿರುವೆ ನಾನು ನಾನೆಂಬುದನ್ನು ಮೊದಲು ಅರಿತು ನೀನು ಏನೆಂಬುದನ್ನು ತಿಳಿಯುವೆ ನೀನು ಏನೆಂಬುದನ್ನು ತಿಳಿಯುವ ಗುರಿ ನನ್ನದಲ್ಲ ನೀನು ಏನೆಂಬುದನ್ನು ತಿಳಿದರೆ ನಿನ್ನ ಸುಖ ದುಃಖಗಳಲ್ಲಿ ನಾನು ಸಹಕರಿಸುವೆ, ಮತ್ತು ನನ್ನ ಸಕಲೈಶ್ವರ್ಯವೇ ಕುತೂಹಲ, ಕಾವ್ಯಧಾರೆ, ಪ್ರೀತಿ, ಹಾಗು ಮಾನಸ ಪೂಜೆಯಂತವು, ಇವೆ ಹೇರಳವಾಗಿರುವ ಜ್ಞಾನ, ನನಗೆ ಭೋಜರಾಜನ ಆಸ್ಥಾನದ ಕವಿ ಆದಿತ್ಯಕಿಂತ ಅವರ ಮನಸಿನಲ್ಲಿ ನೀಡಿದ ಜಾಗವು ಅಧಿಕವಾಗಿದೆ. ಮಾತೆಯೇ ನನ್ನ ಪದಗಳ ಬರೆಯುವ ಚೇತನದ ಮೂಲ, ಇನ್ನು ಇದನ್ನು ಹೇಳಲು, ನೀವು ನನ್ನನ್ನು ಮರುಳನೆನ್ನಲು… ಏನು ಮಾಡಲಿ ನಾನು. ಅಷ್ಟೇ ನನಗೆ ತಿಳಿದಿರುವುದು.

ಕಾಳಿಯ ದಾಸನಾಗಲು ಕಾಳಿಯ ಹುಡುಕುವ ಅವಶ್ಯಕತೆಯಿಲ್ಲ. ಮನದಲ್ಲಿ ಅವಳಿದ್ದಾಳೆ. ನೀನು ಪಶುಪಕ್ಷಿಯನ್ನು ಪ್ರೀತಿಸುತ್ತೀಯಾ ?ನಾನು ಕಾಳಿದಾಸನಾಗುವ ಮೊದಲು ಪಶು ಪಕ್ಷಿಯ ಜೀವದ ಗೆಳೆಯ !ಅಂಬಾ ಎನ್ನುವ ಹಸುವಿನ ಹಾಲು ಕುಡಿದು ಮಗುವೇ ಎನ್ನುವ ಮಾತೆಯ ವಾತ್ಸಲ್ಯ ಮೆರೆದು….ನಂತರ ತಾಯಿಯನ್ನು ಕಳೆದುಕೊಂಡು…. ಕಾಡಿನಲ್ಲಿ ಜೀವಿಸಿದ್ದೆ.. ಪಶು ಪಕ್ಷಿಯ ಸಂಗದಲ್ಲಿ..ಪ್ರಕೃತಿಯೇ ನನ್ನ ದೇವರು ಅಂದುಕೊಂಡಿದ್ದೆ, ಪ್ರಕೃತಿ ನನ್ನ ತಾಯೆ ಅಂದುಕೊಂಡೆ. ಕಾಳಿಮಾತೆಯೇ, ದುರ್ಗಾದೇವಿಯೇ ಪ್ರಕೃತಿ ಎಂದು ಅಂದು ನನಗೆ ತಿಳಿಯದಿರಲು, ಇಂದು ತಾಯಿಯ ಸಾಕ್ಷಾತ್ಕಾರಕ್ಕೆ ಒಳಗಾಗಿರುವೆ ಎನ್ನುವುದು ತಪ್ಪು.

ಮತ್ತೊಂದು ಮಾತು ನಾನು ಕಾಳಿಯನ್ನುನೋಡಲೇ ಇಲ್ಲ. ನನ್ನ ಪ್ರಕೃತಿ ಮಾತೆ ಇಳಿದು ಬಂದು ತೋರಿಸಿದ ರೂಪವಷ್ಟೇ ಕಾಳಿ, ಹೌದೇ ??? ತಿಳಿಯದು, ಏಕೆಂದರೆ ನಾನು ಜ್ಞಾನಿಯಲ್ಲ… ಆದರೆ ನನ್ನ ಕಾವ್ಯಮಯ ಪದಗಳಿಗೆ ನನ್ನ ಪಟ್ಟದರಸಿ ವಿಧ್ಯಾದರೆ ಕಾರಣ, ಹೆಣ್ಣು ಮಾಯೆಯಾದರೆ… ಹೆಣ್ಣು ಸೂರ್ಯನ ಶಕ್ತಿಯ ಜಲಜನಕದಂತೆ, ಸುಡುವುದಲ್ಲ ಗುಣ ಅದು ಭುವಿಯ ಬೆಳಗುವುದು, ಆದರೆ ಹೆಚ್ಚರವಂತೂ ಬೇಕು ಹತ್ತಿರ ಹೋಗಲು, ಅಂತೆಯೇ ಹೆಣ್ಣು … ಹೆಣ್ಣಿನ ಬಗ್ಗೆ ಏನನ್ನು ಹೇಳಲಿ, ನನ್ನ ಮಾತೆ ಸಹ ಹೆಣ್ಣು, ನವದುರ್ಗೆಯಾಗಿ, ನನ್ನ ವಿಧ್ಯಾದರೆಯೂ ಸಹ ಕಾಳಿಯ ಸ್ವರೂಪವೇ…
ಕಿಶೋರಿ ಶಾಕುಂತಲೆಯ ಸ್ಫೂರ್ತಿ ನನ್ನ ಪ್ರೀತಿಯ ಧಾರೆ, ವಿದ್ಯಾದರೆಯೇ ಅದರಲ್ಲಿ ಎರಡು ಮಾತಿಲ್ಲ.

ಮುಂದುವರೆಯುವುದು.

ಅ.ಕ ದಾಸ್ (ಅಕ್ಷಯ್ ಕುಮಾರ್ ದಾಸ್)

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.